ಟೋರಸ್
ವೃತ್ತದ ಸಮತಳದಲ್ಲಿ ಇರುವ ಆದರೆ ಅದನ್ನು ಸಂಧಿಸದ ಸರಳರೇಖೆಯ ಸುತ್ತ ಆ ವೃತ್ತವನ್ನು ಪರಿಭ್ರಮಿಸಿದಾಗ ದೊರೆಯುವ ಆಕೃತಿ. ಸಿಂಬೆ, ರಿಂಗ್, ಟೆನ್ನಿಸ್ ಆಟದ ರಿಂಗ್, ಆ್ಯಂಕರ್ ರಿಂಗ್, ವಾಯು ತುಂಬಿದ ಸೈಕಲ್ ಟ್ಯೂಬ್-ಇವೆಲ್ಲ ಟೋರಸಿಗೆ ಉದಾಹರಣೆಗಳು. ಗಣಿತದಲ್ಲಿ ಟೋರಸನ್ನು ಜಿನಸ್ 1 ಮತ್ತು ಸಂಯೋಜಕತ್ವ 3 (ಕನೆಕ್ಟಿವಿಟಿ) ಇರುವ ಎರಡು ಅಯಾಮಗಳ ಮ್ಯಾನಿಪೋಲ್ಡ್ ಎಂದು ವರ್ಣಿಸುತ್ತಾರೆ.				(ನೋಡಿ- ಮ್ಯಾನಿಫೋಲ್ಡ್)														*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ